Vol. 5, Issue 5, Part A (2019)
ಮಹಾತ್ಮಗಾಂಧಿ ನರೇಗಾ ಯೋಜನೆ ಮತ್ತು ವಾಸ್ತವತೆಯ ಚಿತ್ರಣ-ಒಂದು ಸೈದ್ಧಾಂತಿಕ ಪಕ್ಷಿನೋಟ
ಮಹಾತ್ಮಗಾಂಧಿ ನರೇಗಾ ಯೋಜನೆ ಮತ್ತು ವಾಸ್ತವತೆಯ ಚಿತ್ರಣ-ಒಂದು ಸೈದ್ಧಾಂತಿಕ ಪಕ್ಷಿನೋಟ
Author(s)
ಆನಂದ ಎ¸, ಡಾ. ಎಸ್. ಎ. ಜಾವೀದ್
Abstract
ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳು ಕಲ್ಯಾಣರಾಜ್ಯ ಪರಿಕಲ್ಪನೆಯ ಮುಖಾಂತರ ಆಧುನಿಕತೆ ಮತ್ತು ಅಭಿವೃದ್ಧಿಯನ್ನು ಸಾಧಿಸತೊಡಗಿವೆ. ಭಾರತದಂತಹ ಸ್ವತಂತ್ರ ರಾಷ್ಟ್ರವು ತನ್ನದೆ ಆದಂತಹ ಯೋಜನೆಗಳ ಮುಖೇನ ಅಭಿವೃದ್ಧಿಯನ್ನು ಕಾಣಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು, ಆದರೆ ಭಾರತದಂತಹ ಸ್ವತಂತ್ರ ರಾಷ್ಟ್ರವು ಸಹ ತನ್ನದೆ ಆದಂತಹ ಯೋಜನೆಗಳ ಮಖೇನ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿರುವು ಕಾಣಬಹುದು. ಆದರೆ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಸಾಧಿಸಲು ನೂರೆಂಟು ಅಡೆ ತಡೆಗಳನ್ನು ನೋಡಬಹುದು, ಹಾಗೆಯೇ ಅದಕ್ಕೆ ವೈಜ್ಞಾನಿಕ ಸತ್ಯಾಸತ್ಯತೆಗಳನ್ನು ಸಹ ಸಂಶೋಧನೆಗಳ ಮುಖೇನ ಗುರುತಿಸುವುದು ಸಹ ಅಷ್ಟೇ ಅನಿವಾರ್ಯವಾಗಿದೆ. ಅದಕ್ಕಾಗಿಯೇ ಭಾರತದಾದ್ಯಂತ ಹೆಚ್ಚು ಪ್ರಾಧಾನ್ಯತೆ ಮತ್ತು ಜನಪ್ರಿಯತೆಯ ಯೋಜನೆಯೆಂದೆ ಗುರುತಿಸಿಕೊಂಡಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಷ್ಠರ ಮಟ್ಟಿಗೆ ನಿರುದ್ಯೋಗ ಪ್ರಮಾಣವನ್ನು ಕಡಿಮೆ ಮಾಡಿದೆ ಹಾಗೂ ವಾಸ್ತವವಾಗಿ ಜನರು ನೇರವಾಗಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಫಲಾನುಭವಿಗಳು ಮತ್ತು ಫಲಾನುಭವಿಗಳಲ್ಲದವರ ಸಂದರ್ಶನದ ಮುಖಾಂತರ ತಿಳಿಯುವ ಪ್ರಯತ್ನ ಮಾಡಲಾಗಿದೆ. ಈ ಪತ್ರಿಕೆಯಲ್ಲಿ ಈ ಎಲ್ಲಾ ಪ್ರತಿಕ್ರಿಯೆಗಳ ಜೊತೆಗೆ ಸೈದ್ಧಾಂತಿಕ ಚೌಕಟ್ಟನ್ನು ವಿವರಿಸಿ ರಾಷ್ಟ್ರ ರಾಜ್ಯದ ಪರಿಕಲ್ಪನೆಯೇ ಇಲ್ಲದಂತಹ ರಾಷ್ಟ್ರದಲ್ಲಿ ಯೋಜನೆಗಳು ಪೂರ್ಣ ಫಲಿತಾಂಶ ಕೊಡಲು ಸಾಧ್ಯವೇ ಎಂಬುದನ್ನು ಆಧಾರ ಸಹಿತವಾಗಿ ಒದಗಿಸುವಂತ ಕಾರ್ಯ ಮಾಡಲಾಗಿದೆ. ಹಾಗೆಯೆ ಭ್ರಷ್ಟಾಚಾರದ ಸ್ವರೂಪವನ್ನು ಸಹ ಗ್ರಹಿಸಲಾಗಿದೆ.
How to cite this article:
ಆನಂದ ಎ¸, ಡಾ. ಎಸ್. ಎ. ಜಾವೀದ್. ಮಹಾತ್ಮಗಾಂಧಿ ನರೇಗಾ ಯೋಜನೆ ಮತ್ತು ವಾಸ್ತವತೆಯ ಚಿತ್ರಣ-ಒಂದು ಸೈದ್ಧಾಂತಿಕ ಪಕ್ಷಿನೋಟ. Int J Appl Res 2019;5(5):31-39.